ಯಾವುದು ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಹೇಗೆ ಅರ್ಥಮಾಡಿಕೊಳ್ಳುವುದು ಮತ್ತು Edits ಆ್ಯಪ್ನಲ್ಲಿ ಸ್ಫೂರ್ತಿಯನ್ನು ಹೇಗೆ ಕಂಡುಕೊಳ್ಳುವುದು
ಪ್ರೇಕ್ಷಕರಿಗೆ ಯಾವುದು ಹೆಚ್ಚು ಸ್ಪಂದಿಸುತ್ತದೆ ಎಂಬುದನ್ನು ತಿಳಿದುಕೊಂಡಾಗ ಉತ್ತಮ ವಿಷಯವನ್ನು ರಚಿಸಬಹುದು. Edits ಈಗ ನಿಮ್ಮ ವೀಡಿಯೊ ಒಳನೋಟಗಳನ್ನು ಆಳವಾಗಿ ವಿಶ್ಲೇಷಿಸಲು ಮತ್ತು ಮುಂದೆ ಏನನ್ನು ರಚಿಸಬೇಕು ಎಂಬುದನ್ನು ಅನ್ವೇಷಿಸಲು ನಿಮಗೆ ಇನ್ನಷ್ಟು ಮಾರ್ಗಗಳನ್ನು ನೀಡುತ್ತದೆ.
ನಿಮ್ಮ ರೀಲ್ಗಳನ್ನು ಹೋಲಿಸಿ
ಒಂದು ವೀಡಿಯೊ ಏಕೆ ಹೆಚ್ಚು ಯಶಸ್ವಿಯಾಯಿತು ಮತ್ತು ಇನ್ನೊಂದು ಏಕೆ ಆಗಲಿಲ್ಲ ಎಂದು ಯೋಚಿಸುತ್ತಿದ್ದೀರಾ? ನೀವು ಈಗ ನಿಮ್ಮ ಮೂರು ರೀಲ್ಗಳವರೆಗೆ ಅವುಗಳ ಮೆಟ್ರಿಕ್ಗಳನ್ನು ಪಕ್ಕಪಕ್ಕದಲ್ಲಿಟ್ಟು ಹೋಲಿಸಬಹುದು. ವೀಕ್ಷಣೆಗಳು, ವೀಕ್ಷಣೆ ಸಮಯ, ಅನುಸರಣೆಗಳು, ಸಂವಹನಗಳು: ಇವೆಲ್ಲವನ್ನೂ ಒಂದೇ ಸ್ಥಳದಲ್ಲಿ ನೋಡಿ, ಇದರಿಂದ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನೀವು ತ್ವರಿತವಾಗಿ ಗುರುತಿಸಿ, ಆ ತಿಳುವಳಿಕೆಯನ್ನು ನಿಮ್ಮ ಮುಂದಿನ ವೀಡಿಯೊಗೆ ಅನ್ವಯಿಸಬಹುದು.
ಆ್ಯಕ್ಸೆಸ್ ಮಾಡುವುದು ಹೇಗೆ: Edits ನಲ್ಲಿ ಒಳನೋಟಗಳ ಟ್ಯಾಬ್ ತೆರೆಯಿರಿ ನಂತರ ಹೋಲಿಸಿ ಅನ್ನು ಟ್ಯಾಪ್ ಮಾಡಿ. ಅವುಗಳ ಮೆಟ್ರಿಕ್ಗಳನ್ನು ಪಕ್ಕಪಕ್ಕದಲ್ಲಿ ವೀಕ್ಷಿಸಲು ಗರಿಷ್ಠ 3 ರೀಲ್ಗಳನ್ನು ಆಯ್ಕೆಮಾಡಿ.
ಪ್ರೇಕ್ಷಕರ ಒಳನೋಟಗಳು
ನಿಮ್ಮ ವಿಷಯವನ್ನು ಯಾರು ವೀಕ್ಷಿಸುತ್ತಿದ್ದಾರೆ ಎಂಬುದರ ಸ್ಪಷ್ಟ ಚಿತ್ರಣವನ್ನು ಪಡೆಯಿರಿ. Insights ನಲ್ಲಿರುವ ಪ್ರೇಕ್ಷಕರ ಟ್ಯಾಬ್ ನಿಮ್ಮ ಅನುಸರಿಸುವವರು ಎಲ್ಲಿದ್ದಾರೆ, ಅವರು ಯಾವುದರಲ್ಲಿ ಆಸಕ್ತಿ ಹೊಂದಿದ್ದಾರೆ ಮತ್ತು ಅವರು ಯಾವಾಗ ಹೆಚ್ಚು ಸಕ್ರಿಯವಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಬ್ರ್ಯಾಂಡ್ಗಳು ಮತ್ತು ಪಾಲುದಾರರೊಂದಿಗೆ ನೇರವಾಗಿ ಹಂಚಿಕೊಳ್ಳಲು ನಿಮ್ಮ ವೀಡಿಯೊ ಒಳನೋಟಗಳನ್ನು ನೀವು PDF ಆಗಿ ಎಕ್ಸ್ಪೋರ್ಟ್ ಮಾಡಬಹುದು.
ಆ್ಯಕ್ಸೆಸ್ ಮಾಡುವುದು ಹೇಗೆ: Edits ತೆರೆಯಿರಿ ಮತ್ತು ಒಳನೋಟಗಳ ಟ್ಯಾಬ್ ಅನ್ನು ಟ್ಯಾಪ್ ಮಾಡಿ. ನಿಮ್ಮನ್ನು ಅನುಸರಿಸುವವರು ಎಲ್ಲಿದ್ದಾರೆ, ಅವರು ಯಾವಾಗ ಹೆಚ್ಚು ಸಕ್ರಿಯವಾಗಿರುತ್ತಾರೆ ಮತ್ತು ಹೆಚ್ಚಿನದನ್ನು ನೋಡಲು ಪ್ರೇಕ್ಷಕರ ವಿಭಾಗವನ್ನು ಆಯ್ಕೆಮಾಡಿ. ನಿಮ್ಮ ಒಳನೋಟಗಳನ್ನು PDF ಆಗಿ ಡೌನ್ಲೋಡ್ ಮಾಡಲು ಎಕ್ಸ್ಪೋರ್ಟ್ ಐಕಾನ್ ಅನ್ನು ಟ್ಯಾಪ್ ಮಾಡಿ.
ಸ್ಫೂರ್ತಿ ಟ್ಯಾಬ್ನಲ್ಲಿ Reels ಹುಡುಕಾಟ
ನಿರ್ದಿಷ್ಟ ವಿಷಯದ ಕುರಿತು ಆಲೋಚನೆಗಳನ್ನು ಹುಡುಕುತ್ತಿರುವಿರಾ? ಸ್ಫೂರ್ತಿ ಟ್ಯಾಬ್ ಈಗ ಹುಡುಕಾಟವನ್ನು ಹೊಂದಿದೆ. “ಜನ್ಮದಿನ” ಅಥವಾ “ಪ್ರಯಾಣ” ದಂತಹ ಏನನ್ನಾದರೂ ಟೈಪ್ ಮಾಡಿ ಮತ್ತು ಆ ಕ್ಷಣಕ್ಕೆ ಅನುಗುಣವಾಗಿ ಆಡಿಯೋ, ಆಲೋಚನೆಗಳು ಮತ್ತು ಟೆಂಪ್ಲೇಟ್ಗಳನ್ನು ಪಡೆಯಿರಿ. ಕಡಿಮೆ ಸ್ಕ್ರಾಲ್ ಮಾಡುವಿಕೆ, ಹೆಚ್ಚು ರಚಿಸುವಿಕೆ.
ಆ್ಯಕ್ಸೆಸ್ ಮಾಡುವುದು ಹೇಗೆ: Edits ತೆರೆಯಿರಿ ಮತ್ತು ಸ್ಫೂರ್ತಿ ಟ್ಯಾಬ್ ಅನ್ನು ಟ್ಯಾಪ್ ಮಾಡಿ. ಷಯವನ್ನು ಟೈಪ್ ಮಾಡಲು ಮೇಲ್ಭಾಗದಲ್ಲಿರುವ ಹುಡುಕಾಟ ಪಟ್ಟಿಯನ್ನು ಬಳಸಿ, ನಂತರ ಅದಕ್ಕೆ ಸಂಬಂಧಿಸಿದ ಆಡಿಯೋ, ಆಲೋಚನೆಗಳು ಮತ್ತು ಟೆಂಪ್ಲೇಟ್ಗಳನ್ನು ಅನ್ವೇಷಿಸಿ.
Edits ನಲ್ಲಿನ ಇತ್ತೀಚಿನ ಪರಿಕರಗಳು ಮತ್ತು ಫೀಚರ್ಗಳ ಕುರಿತು ನಿಯಮಿತ ಅಪ್ಡೇಟ್ಗಳಿಗಾಗಿ @creators ಅನ್ನು ಅನುಸರಿಸಿ.
