Edits ಅನ್ನು ಪರಿಚಯಿಸಲಾಗುತ್ತಿದೆ: ನಿಮ್ಮ ಫೋನ್‌ನಲ್ಲಿ ಉತ್ತಮ ವೀಡಿಯೊಗಳನ್ನು ರಚಿಸಿ

ಇಂದು, ರಚನೆಕಾರರಿಗಾಗಿ ವಿನ್ಯಾಸಗೊಳಿಸಲಾದ ಹೊಸ ವೀಡಿಯೊ ರಚನೆಯ ಆ್ಯಪ್ ಆಗಿರುವ Edits ಅನ್ನು ನಾವು ಬಿಡುಗಡೆ ಮಾಡುತ್ತಿದ್ದೇವೆ. Instagram ಜನರು ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಸಹಾಯ ಮಾಡುವ ಉದ್ದೇಶದಿಂದ ಅಸ್ತಿತ್ವದಲ್ಲಿದ್ದು, ಅದಕ್ಕಾಗಿ, Instagram ಅಥವಾ Facebook ಗೆ ಮಾತ್ರ ಸೀಮಿತವಾಗಿರದೆ, ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಸಹಾಯ ಮಾಡುವ ಅತ್ಯುತ್ತಮ ಸೃಜನಾತ್ಮಕ ಪರಿಕರಗಳನ್ನು ನಿರ್ಮಿಸಲು ನಾವು ಬಯಸುತ್ತೇವೆ. ಈ ಪ್ರಯಾಣದಲ್ಲಿ ಇದು ಕೇವಲ ಮೊದಲ ಹೆಜ್ಜೆಯಾಗಿದೆ ಮತ್ತು ನಿಮ್ಮ ಫೀಡ್‌ಬ್ಯಾಕ್‌‌ನೊಂದಿಗೆ Edits ಅನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ನಾವು ಕಾತರರಾಗಿದ್ದೇವೆ.


ನಿಮ್ಮ ರಚನೆಯ ಪ್ರಕ್ರಿಯೆಯನ್ನು ಒಂದೇ ಸ್ಥಳದಲ್ಲಿ ಬೆಂಬಲಿಸಲು ನಿಮಗೆ ಪರಿಕರಗಳನ್ನು ನೀಡುತ್ತದೆ


ವೀಡಿಯೊಗಳನ್ನು ರಚಿಸುವ ಪ್ರಕ್ರಿಯೆಯು ಸವಾಲಿನಿಂದ ಕೂಡಿರಬಹುದು, ಹೆಚ್ಚಾಗಿ ಬಹು ಆ್ಯಪ್‌ಗಳು ಮತ್ತು ಸಂಕೀರ್ಣವಾದ ಕೆಲಸದ ಹರಿವಿನ ಅಗತ್ಯವಿರುತ್ತದೆ. Edits ನೊಂದಿಗೆ, ನೀವು ಈಗ ವೀಡಿಯೊ ರಚನೆಗಾಗಿ ಶಕ್ತಿಶಾಲಿ ಸಾಮರ್ಥ್ಯಗಳೊಂದಿಗೆ ಮೀಸಲಾದ ಸ್ಥಳವನ್ನು ಹೊಂದಿದ್ದೀರಿ.


  • ಆಲೋಚನೆಗಳನ್ನು ಸಂಗ್ರಹಿಸುವುದು, ನಿಮ್ಮ ಪ್ರಾಜೆಕ್ಟ್‌ಗಳನ್ನು ನಿರ್ವಹಿಸುವುದು ಮತ್ತು ಆ್ಯಪ್‌ನಿಂದ ಹೊರಹೋಗದೆ ವಾಟರ್‌ಮಾರ್ಕ್‌ರಹಿತವಾಗಿ ಎಡಿಟ್ ಮತ್ತು ಎಕ್ಸ್‌ಪೋರ್ಟ್ ಮಾಡುವುದರ ಮೂಲಕ ನಿಮ್ಮ ಸಂಪೂರ್ಣ ವಿಷಯ ರಚನೆ ಪ್ರಕ್ರಿಯೆಯನ್ನು ಒಂದೇ ಸ್ಥಳಕ್ಕೆ ತಂದುಕೊಳ್ಳಿ.
  • ಉತ್ತಮ ಗುಣಮಟ್ಟದ ಕ್ಯಾಮರಾ, ಫ್ರೇಮ್‌ಗೆ ನಿಖರವಾಗಿ ಹೊಂದುವ ಟೈಮ್‌ಲೈನ್ ಮತ್ತು ಕಟೌಟ್‌ಗಳು ಅಥವಾ AI-ಚಾಲಿತ ಆನಿಮೇಶನ್‌ಗಳಂತಹ ಎಫೆಕ್ಟ್‌ಗಳನ್ನು ಒಳಗೊಂಡ ಶಕ್ತಿಶಾಲಿ ಪರಿಕರಗಳೊಂದಿಗೆ ಉತ್ತಮ ವೀಡಿಯೊಗಳನ್ನು ರಚಿಸಿ.
  • ಟ್ರೆಂಡಿಂಗ್ ಆಡಿಯೋಗಳಿರುವ ರೀಲ್‌ಗಳ ಸ್ಫೂರ್ತಿ ಫೀಡ್ ಮತ್ತು ಯಾವುದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನಿಮಗೆ ತೋರಿಸುವ ಕಾರ್ಯಕ್ಷಮತೆಯ ಒಳನೋಟಗಳನ್ನು ಬಳಸಿಕೊಂಡು ನಿಮ್ಮ ವಿಷಯವನ್ನು ಆಪ್ಟಿಮೈಸ್ ಮಾಡಿ.

ನಿಮ್ಮ ಅಗತ್ಯಗಳನ್ನು ಪೂರೈಸುವ ಆ್ಯಪ್ ಅನ್ನು ನಿರ್ಮಿಸುವುದು


ಕಿರು-ರೂಪದ ವೀಡಿಯೊ ರಚನೆಗಾಗಿ ಅಗತ್ಯವಿರುವ ಬೇಡಿಕೆಗಳನ್ನು ನಿಜವಾಗಿಯೂ ಪೂರೈಸುವ ಆ್ಯಪ್ ಅನ್ನು ನಿರ್ಮಿಸಲು, ನಿಮ್ಮಂತಹ ರಚನೆಕಾರರೊಂದಿಗೆ ನಿಕಟ ಸಹಭಾಗಿತ್ವದಲ್ಲಿ ಕೆಲಸ ಮಾಡುವುದು ಬಹಳ ಮುಖ್ಯವಾಗಿದೆ.


ಕಳೆದ ವರ್ಷದಿಂದ ನಾವು ವಿವಿಧ ಪರಿಕಲ್ಪನೆಗಳನ್ನು ಪರೀಕ್ಷಿಸಲು ಮತ್ತು ಅವರ ಫೀಡ್‌ಬ್ಯಾಕ್‌ ಅನ್ನು ಸಂಯೋಜಿಸಲು ಹಲವಾರು ರಚನೆಕಾರರೊಂದಿಗೆ ಸಹಯೋಗ ಹೊಂದಿದ್ದೇವೆ. Edits ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಿರುವ ಅನೇಕ ರಚನೆಕಾರರಿಗೆ ನಾವು ಆರಂಭಿಕ ಆ್ಯಕ್ಸೆಸ್ ಅನ್ನು ಸಹ ನೀಡಿದ್ದೇವೆ. ಅವರಲ್ಲಿ ಕೆಲವರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ:

Edits ಗೆ ಮುಂದೇನು?


Edits ಅನ್ನು ಇನ್ನಷ್ಟು ಉತ್ತಮಗೊಳಿಸುವಲ್ಲಿ ನಿಮ್ಮ ಫೀಡ್‌ಬ್ಯಾಕ್‌ ಮಹತ್ವದ ಪಾತ್ರ ವಹಿಸುತ್ತದೆ ಮತ್ತು ನೀವು ಹೆಚ್ಚು ವಿನಂತಿಸಿರುವ ಫೀಚರ್‌ಗಳನ್ನು ಇನ್ನಷ್ಟು Edits ಗೆ ಸೇರಿಸಲು ನಾವು ಉತ್ಸುಕರಾಗಿದ್ದೇವೆ. ನಾವು ಈಗಾಗಲೇ ಹೊಸ ಫೀಚರ್‌ಗಳು ಮತ್ತು ಅಪ್‌ಡೇಟ್‌ಗಳನ್ನು ಸೇರಿಸಲು ಕೆಲಸ ಮಾಡುತ್ತಿದ್ದೇವೆ, ಇದರಲ್ಲಿ ಶೀಘ್ರದಲ್ಲೇ ಆ್ಯಪ್‌ಗೆ ಬರಲಿರುವ ಕೆಲವು ಹೈಲೈಟ್‌ಗಳು ಸೇರಿವೆ.


  • ಕೀಫ್ರೇಮ್‌ಗಳು: ನಿಮ್ಮ ಕ್ಲಿಪ್‌ಗಳ ಸ್ಥಾನ, ತಿರುಗುವಿಕೆ ಮತ್ತು ಸ್ಕೇಲ್ ಅನ್ನು ಆನಿಮೇಟ್ ಮಾಡಲು ನಿಖರವಾದ ಕ್ಷಣಗಳನ್ನು ಪಿನ್‌ಪಾಯಿಂಟ್ ಮಾಡಿ.
  • ಮಾರ್ಪಡಿಸಿ: AI ಮೂಲಕ ನಿಮ್ಮ ವೀಡಿಯೊಗಳ ನೋಟ ಮತ್ತು ಭಾವನೆಯನ್ನು ತ್ವರಿತವಾಗಿ ಬದಲಾಯಿಸಿ.
  • ಸಹಯೋಗ: ಫೀಡ್‌ಬ್ಯಾಕ್‌ ಮತ್ತು ಸೃಜನಶೀಲ ರಚನೆಗಳಿಗಾಗಿ ಸ್ನೇಹಿತರು, ಇತರ ರಚನೆಕಾರರು ಅಥವಾ ಬ್ರ್ಯಾಂಡ್‌ಗಳೊಂದಿಗೆ ಡ್ರಾಫ್ಟ್‌ಗಳನ್ನು ಸುಲಭವಾಗಿ ಹಂಚಿಕೊಳ್ಳಿ.
  • ನಿಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಹೆಚ್ಚಿನ ಆಯ್ಕೆಗಳು: ರಾಯಲ್ಟಿ-ಮುಕ್ತ ಆಯ್ಕೆಗಳನ್ನು ಒಳಗೊಂಡಂತೆ ಇನ್ನಷ್ಟು ಫಾಂಟ್‌ಗಳು, ಪಠ್ಯ ಆನಿಮೇಶನ್‌ಗಳು, ಪರಿವರ್ತನೆಗಳು, ವಾಯ್ಸ್ ಎಫೆಕ್ಟ್‌ಗಳು, ಫಿಲ್ಟರ್‌ಗಳು, ಸೌಂಡ್ ಎಫೆಕ್ಟ್‌ಗಳು ಮತ್ತು ಸಂಗೀತದ ಆಯ್ಕೆಗಳು.

Edits ಜಾಗತಿಕವಾಗಿ ಲಭ್ಯವಿದೆ ಮತ್ತು App Store ಮತ್ತು Google Play Store ನಲ್ಲಿ ಡೌನ್‌ಲೋಡ್ ಮಾಡಲು ಉಚಿತವಾಗಿದೆ. ಪ್ರಾರಂಭಿಸಲು, ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ನಿಮ್ಮ Instagram ಖಾತೆಯೊಂದಿಗೆ ಸೈನ್ ಇನ್ ಮಾಡಿ.