ನೀವು ಎದ್ದು ಕಾಣುವಂತೆ ಮಾಡಲು ಸಹಾಯ ಮಾಡಲು ರಚನೆಕಾರರೊಂದಿಗೆ ನಿರ್ಮಿಸಲಾದ Edits ಪರಿಕರಗಳನ್ನು ಅನ್ವೇಷಿಸಿ

Instagram ರಚನೆಕಾರರೊಂದಿಗೆ ದೀರ್ಘಕಾಲದ ಇತಿಹಾಸವನ್ನು ಹೊಂದಿದೆ ಮತ್ತು “ನಾವು ನಿಮ್ಮ ಮಾತನ್ನು ಕೇಳುತ್ತಿದ್ದೇವೆ” ಎಂದು ತಿಳಿಸಲು Edits ನಮ್ಮ ಇತ್ತೀಚಿನ ಪ್ರಯತ್ನವಾಗಿದ್ದು ನಾವು ನಿಮ್ಮ ಮಾತುಗಳನ್ನು ಆಲಿಸುವುದನ್ನು ಮುಂದುವರಿಸುತ್ತಿದ್ದೇವೆ. ನೀವು ಎದ್ದು ಕಾಣಲು ಮತ್ತು ನಿಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿರುವಾಗ, ನೀವು ಬಳಸುವ ಪರಿಕರಗಳು ನಿಮ್ಮನ್ನು ಎಂದಿಗೂ ಸೀಮಿತಗೊಳಿಸಬಾರದು.


ನಾನು ಶಾನ್, Edits ತಂಡದ ಇಂಜಿನಿಯರಿಂಗ್ ನಿರ್ವಾಹಕನಾಗಿದ್ದೇನೆ.


ನಿಮಗಾಗಿ, ನಿಮ್ಮೊಂದಿಗೆ ನಿರ್ಮಿಸಲಾಗಿದೆ


Edits ಅನ್ನು ರಚನೆಕಾರರೊಂದಿಗೆ ನಿರ್ಮಿಸಲಾಗಿದೆ. ನಾವು ರಚನೆಕಾರರಿಗೆ ಕೋಡ್ ಬರೆಯುವ ಅಥವಾ ವಿನ್ಯಾಸ ಡಾಕ್‌ಗಳ ಮೇಲೆ ಕೆಲಸ ಮಾಡುವ ಜವಾಬ್ದಾರಿಯನ್ನು ನೀಡಿಲ್ಲ, ಆದರೆ ನಾವು ಏನನ್ನು ನಿರ್ಮಿಸುತ್ತೇವೆ ಮತ್ತು ಅದನ್ನು ಹೇಗೆ ನಿರ್ಮಿಸುತ್ತೇವೆ ಎಂಬುದನ್ನು ರೂಪಿಸಲು ಸಹಾಯವಾಗುವ ಅಮೂಲ್ಯ ಫೀಡ್‌ಬ್ಯಾಕ್‌ಗಳನ್ನು ನೀಡುವ ಮೂಲಕ ರಚನೆಕಾರರು ಮೊದಲ ದಿನದಿಂದಲೇ ನಮ್ಮೊಂದಿಗೆ ಇದ್ದರು.


…ಮತ್ತು ಇದು ನಿಲ್ಲಿಲ್ಲ!


ನಾನು ಮತ್ತು ಸಂಪೂರ್ಣ Edits ತಂಡವು ಪ್ರತಿದಿನ ರಚನೆಕಾರರೊಂದಿಗೆ ಕೆಲಸ ಮಾಡುತ್ತೇವೆ. ನಾವು Instagram ನಲ್ಲಿ ಒಂದು DM ಗುಂಪನ್ನು ಹೊಂದಿದ್ದು, ಅಲ್ಲಿ ನಮ್ಮ ಕೆಲವು ಪವರ್ ಬಳಕೆದಾರರು ಫೀಡ್‌ಬ್ಯಾಕ್‌ ನೀಡಬಹುದು ಮತ್ತು ಫೀಚರ್‌ಗಳನ್ನು ವಿನಂತಿಸಬಹುದು; ಜೊತೆಗೆ, ಅದನ್ನು ಹೇಗೆ ಸುಧಾರಿಸಬಹುದು ಎಂಬುದರ ಕುರಿತು ಸಲಹೆಗಳು ಮತ್ತು ಟಿಪ್ಪಣಿಗಳನ್ನು ಕಳುಹಿಸುವ ರಚನೆಕಾರರ ಸಲಹಾ ಸಮಿತಿಯೂ ಇದೆ, ಮತ್ತು ಹೊಸ ಆಲೋಚನೆಗಳ ಕುರಿತು ಚರ್ಚಿಸಿ ಅವುಗಳನ್ನು ಅಭಿವೃದ್ಧಿಪಡಿಸಲು ನಾವು ರಚನೆಕಾರರೊಂದಿಗೆ ನಿಯಮಿತ ಲೈವ್ ಮೀಟಿಂಗ್‌ಗಳನ್ನು ನಡೆಸುತ್ತೇವೆ. ಕೆಲವು ತಂಡದ ಸದಸ್ಯರು (ನಾನು ಸೇರಿದಂತೆ!) ಪ್ರತಿದಿನ Threads ಮತ್ತು Instagram ಅನ್ನು ಓದುತ್ತಾ, ಫೀಡ್‌ಬ್ಯಾಕ್‌‌ಗಾಗಿ ಗಾಗಿ ನೋಡುತ್ತಿದ್ದಾರೆ. ನೀವೆಲ್ಲರೂ ಈ ತಂಡಕ್ಕೆ ತುಂಬಾ ಅಮೂಲ್ಯರು, ಮತ್ತು ಪ್ರತಿಯೊಬ್ಬರ ಪರವಾಗಿ ನಾನು ನಿಮಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ!


ಹಾಗಾಗಿ ನಿಮ್ಮ ಮುಂದಿನ ವೀಡಿಯೊ ಆಲೋಚನೆಯಲ್ಲಿ ಒಟ್ಟಿಗೆ ಕೆಲಸ ಮಾಡೋಣ!


ಎಡಿಟ್ ಮಾಡುವಿಕೆಗಾಗಿ ಮೂಲಭೂತ ಸಾಧನಗಳು ಮತ್ತು ಸೃಜನಶೀಲತೆಗಾಗಿ ಶಕ್ತಿಯುತ ಪರಿಕರಗಳು


Edits ಸ್ಫೂರ್ತಿಯ ಫೀಡ್ ಅಥವಾ Instagram ನಲ್ಲಿ ಸ್ಕ್ರಾಲ್ ಮಾಡುತ್ತಿರುವಾಗ ಯಾವುದಾದರೂ ಸ್ಫೂರ್ತಿದಾಯಕ ಆಲೋಚನೆ ಕಂಡು, “ನಾನು ಕೂಡ ಇದನ್ನು ಮಾಡಬಹುದೇ?” ಎಂದು ನೀವು ಎಂದಾದರೂ ಯೋಚಿಸಿದ್ದೀರಾ? Edits ತಂಡದೊಂದಿಗೆ ಮೊದಲ ದಿನದಿಂದಲೇ ಕೆಲಸ ಮಾಡುತ್ತಿರುವ ಮತ್ತು ನನ್ನ ರಾತ್ರಿ ತಡದ ತಿಂಡಿಗಳಿಗೆ ಪ್ರಮುಖ ಕಾರಣರಾಗಿರುವ @iankyo ಅವರು ಅಡುಗೆ ಹಾಗೂ ವೀಡಿಯೊ ಶೈಲಿ ಎರಡರಲ್ಲಿಯೂ ವೈರಲ್ ಪಾಕವಿಧಾನಗಳ ರಾಜರಾಗಿದ್ದಾರೆ. ಇಯಾನ್ ಅವರು ತಂಡಕ್ಕೆ ನೀಡಿದ ಒಂದು ಪ್ರಮುಖ ಸಂದೇಶವೆಂದರೆ, ನಾವು ಎಷ್ಟು ಫೀಚರ್‌ಗಳನ್ನು ಸೇರಿಸಿದರೂ ಸಹ, Edits ಎಲ್ಲರಿಗೂ ಸರಳವಾಗಿಯೂ ಬಳಸಲು ಸುಲಭವಾಗಿಯೂ ಇರಬೇಕು ಎಂದಾಗಿದೆ. ಇತ್ತೀಚೆಗೆ ಅವರು ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ರುಚಿಕರವಾದ ಚೀಸ್ ಸಾಸ್ ಅನ್ನು ತಯಾರಿಸುತ್ತಿರುವ ಇಯಾನ್ ಅವರ ಸಿಗ್ನೇಚರ್ ಆಡಿಯೋ ಟ್ರ್ಯಾಕ್, ದೃಶ್ಯಗಳ ನಡುವೆ ನಿಖರವಾಗಿ ಸಮಯಕ್ಕೆ ಹೊಂದಿಸಿದ ಕಟ್‌ಗಳು ಮತ್ತು ಅವರು ತಯಾರಿಸುತ್ತಿರುವ ಆಹಾರವನ್ನು ನೋಡಿ ನೀವು ಮೈಮರೆತಿರದ ಸಮಯದಲ್ಲಿ ಓದಲು ಸಾಧ್ಯವಾಗುವ ಶೀರ್ಷಿಕೆಗಳು ಸೇರಿದ್ದವು. ಮೊದಲ ನೋಟದಲ್ಲೇ ಬಳಸಲು ಸುಲಭವಾಗುವಂತೆ ಹಾಗೂ ಅದರ ಆಂತರಿಕ ಕಾರ್ಯವಿಧಾನದಲ್ಲಿ ಶಕ್ತಿಯುತ ಸಾಮರ್ಥ್ಯಗಳನ್ನು ಹೊಂದಿರುವಂತೆ ಮಾಡುವುದು Edits ನ ಗುರಿಯಾಗಿದೆ.


ಉದಾಹರಣೆಗೆ ಶೀರ್ಷಿಕೆಗಳನ್ನು ತೆಗೆದುಕೊಳ್ಳಿ. ಕೇವಲ ಒಂದು ಬಟನ್ ಒತ್ತುವ ಮೂಲಕ ನಿಮ್ಮ ಶೀರ್ಷಿಕೆಗಳನ್ನು ರಚಿಸಿ ತಕ್ಷಣ ಬಳಸಲು ಸಿದ್ಧಗೊಳಿಸಬಹುದು; ಆದರೆ ನಿಮಗೆ ಹೆಚ್ಚು ಕಸ್ಟಮೈಸೇಶನ್ ಬೇಕಿದ್ದರೆ, ನೀವು ಬಯಸುವ ವೈಬ್ ಅನ್ನು ಪಡೆಯಲು ಬಲ್ಕ್ ಎಡಿಟರ್ ಹಾಗೂ ಶೈಲಿ ಎಡಿಟರ್‌ಗಳನ್ನು ಬಳಸಬಹುದು. ನಾವು ನಿಯಮಿತವಾಗಿ ಹೊಸ ಫಾಂಟ್‌ಗಳು, ಅನಿಮೇಶನ್‌ಗಳು ಮತ್ತು ಎಫೆಕ್ಟ್‌ಗಳನ್ನು ಬಿಡುಗಡೆ ಮಾಡುತ್ತಿದ್ದೇವೆ ಆದ್ದರಿಂದ ನಿಮ್ಮ ಆ್ಯಪ್ ಅನ್ನು ಅಪ್‌ಡೇಟ್ ಮಾಡಲು ಮರೆಯದಿರಿ ಮತ್ತು ಅವುಗಳನ್ನು ಪರಿಶೀಲಿಸಿ ಏಕೆಂದರೆ ಅದು ನಿಮ್ಮ ವೈರಲ್ ಪಾಕವಿಧಾನವನ್ನು ಹುಡುಕಲು ಪ್ರಮುಖವಾಗಿರಬಹುದು!


ನಿಮ್ಮ ರೀಲ್‌ಗಳಿಗೆ ಜೀವ ತುಂಬಲು ಕೀಫ್ರೇಮ್‌ಗಳನ್ನು ಬಳಸಿ


ಆದ್ದರಿಂದ ನಿಮ್ಮ ವೀಡಿಯೊ ಶೈಲಿಯನ್ನು ಕಂಡುಕೊಳ್ಳಲು ನೀವು ಪ್ರಯತ್ನಿಸುತ್ತಿದ್ದೀರಿ ಮತ್ತು ನಿಮ್ಮ ಕ್ಲಿಪ್‌ಗಳನ್ನು ಸೆರೆಹಿಡಿಯುವುದನ್ನು ನೀವು ಪೂರ್ಣಗೊಳಿಸಿದ್ದೀರಿ. ಸರಳವಾದ ವೀಡಿಯೊವನ್ನು ಶೂಟ್ ಮಾಡುವುದು ಉತ್ತಮ ಆರಂಭವಾಗಿದೆ ಆದರೆ ನಿಜವಾಗಿಯೂ ವಿಭಿನ್ನವಾಗಿ ಕಾಣಿಸಿಕೊಳ್ಳಲು ಪ್ರತಿ ಕಟ್‌ನಲ್ಲೂ ಅಭಿವ್ಯಕ್ತಿಪೂರ್ಣ ಪ್ಯಾನಿಂಗ್‌, ರೋಮಾಂಚಕ ಜೂಮ್‌ಗಳು ಮತ್ತು ಚಲನೆಯನ್ನು ಸೇರಿಸಬೇಕೆಂದು ನೀವು ಎಂದಾದರೂ ಬಯಸಿದ್ದೀರಾ? @vitakari (ifykyk) ಅವರ ಅತ್ಯಂತ ಅದ್ಭುತವಾದ ವಿಷಯವೆಂದರೆ, ಅವರು ತಮ್ಮ ವೀಡಿಯೊಗಳ ಬಹುತೇಕ ಪ್ರತಿಯೊಂದು ಕಟ್‌ನಲ್ಲೂ ಅದ್ಭುತ ವ್ಯಕ್ತಿತ್ವ ಮತ್ತು ವಿಶೇಷ ಶೈಲಿಯನ್ನು ತುಂಬುತ್ತಾರೆ. ಅವರು ಇದನ್ನು ಸಾಧಿಸುವ ಒಂದು ವಿಧಾನವೆಂದರೆ ಕೀಫ್ರೇಮ್‌ಗಳು ಎಂಬ ಅತ್ಯಂತ ಆಸಕ್ತಿದಾಯಕ ಫೀಚರ್ ಅನ್ನು ಬಳಸುವುದರ ಮೂಲಕ ಆಗಿದ್ದು ಈ ಫೀಚರ್ ಅನ್ನು Edits ಗೆ ತರಬೇಕೆಂಬ ವಿಷಯದಲ್ಲಿ ವಿಟಾ ಅವರಿಗೆ ಅಪಾರ ಆಸಕ್ತಿ ಇತ್ತು.


ಇನ್ನು ಮುಂದೆ ಜೂಮ್ ಮಾಡಿದ ಫ್ರೇಮ್‌ಗೆ ಹಠಾತ್ ಕಟ್‌ಗಳನ್ನು ಬಳಸುವ ಅಗತ್ಯವಿಲ್ಲ, ಅಥವಾ ಮಧ್ಯದಿಂದ ಹೊರಗಿರುವ ಯಾವುದಾದರೂ ವಿಷಯದ ಮೇಲೆ ಗಮನ ಕೇಂದ್ರೀಕರಿಸಲು ವೀಡಿಯೊವನ್ನು ವಿಚಿತ್ರವಾಗಿ ಪರದೆಯಾಚೆಗೆ ಸರಿಸುವ ಅಗತ್ಯವೂ ಇಲ್ಲ. ಬದಲಾಗಿ, ನಿಮ್ಮ ಮುಂದಿನ ವೀಡಿಯೊವನ್ನು ಜೀವಂತಗೊಳಿಸಿ ಮತ್ತು ಕೀಫ್ರೇಮ್‌ಗಳನ್ನು ಪ್ರಯತ್ನಿಸಿ!


ಏನೋ ತಪ್ಪಾಗಿದೆ
ಈ ವೀಡಿಯೊ ಪ್ಲೇ ಮಾಡುವಲ್ಲಿ ನಾವು ಸಮಸ್ಯೆ ಎದುರಾಗಿದೆ.

"ಕೀಫ್ರೇಮ್‌ಗಳಿಗೆ “ಈಸಿಂಗ್ ಕರ್ವ್” ಆಯ್ಕೆಯು ನನ್ನ ಇಲ್ಯೂಷನ್‌ಗಳಿಗೆ ಪ್ರಮುಖ ಬದಲಾವಣೆಯಾಗಿದೆ!" - @vitakari


ನಮ್ಮೊಂದಿಗೆ ಒಂದು ಸ್ಟೋರಿಯನ್ನು ಹೇಳಿ


Edits ನಿಮ್ಮ ಸಂಪೂರ್ಣ ಸೃಜನಾತ್ಮಕ ಪ್ರಕ್ರಿಯೆಯನ್ನು ಒಂದೇ ಆ್ಯಪ್‌ಗೆ ತರಲು ಮತ್ತು Instagram ನಲ್ಲಿ ನಿಮ್ಮ ವಿಷಯವನ್ನು ಗಮನಾರ್ಹವಾಗಿಸಲು ಸಹಾಯ ಮಾಡುವ ಸುಲಭವಾದ ಮಾರ್ಗವಾಗಿದೆ. ಪ್ರತಿ ವಾರವೂ ಆ್ಯಪ್ ಅನ್ನು ಇನ್ನಷ್ಟು ಉತ್ತಮಗೊಳಿಸುವ ಈ ಪಯಣದಲ್ಲಿ ರಚನೆಗಾರರೊಂದಿಗೆ ಜೊತೆಯಾಗಿರುವುದಕ್ಕೆ ನಾವು ತುಂಬಾ ಕೃತಜ್ಞರಾಗಿದ್ದೇವೆ, ಮತ್ತು ನಿಮ್ಮ ವಿಷಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಹಾಯ ಮಾಡುವ ಹೊಸ ಫೀಚರ್‌ಗಳನ್ನು ಮುಂದುವರಿಸಿ ಪರಿಚಯಿಸುತ್ತಿರುತ್ತೇವೆ. ಇಂದು Edits ಪ್ರಯತ್ನಿಸಿ ಮತ್ತು ನೀವು ಮುಂದೆ ಏನನ್ನು ನೋಡಲು ಬಯಸುತ್ತೀರಿ ಎಂಬುದನ್ನು ನಮಗೆ ತಿಳಿಸಿ!